Tuesday, 26 April 2011

ಮನದ ಬೇಗುದಿ!!


ಮರದಾಗ ನೆರಳಿಲ್ಲ
ಮನದಾಗ ನಲಿವಿಲ್ಲ;

ಹೊರ ಬಿಸಿಲಿಗೆ
ಕಾಯುತಿದೆ ಮೈಯಲ್ಲ;

ಒಳ ಬೇಗುದಿಗೆ
ನೊಯುತಿದೆ ಮನಸೆಲ್ಲ;

ನಿರೀಕ್ಷೆಯ ಪಯಣದಲಿ
ನಿರಾಸೆಯ ಹಾದಿ
ನುಗ್ಗುತಿದೆ ತಿರುವಿನಲಿ;

ಜಗವೇ ಜಗಝಗಿಸುತಿದೆ
ಬೆಳಕಿನೋಕುಳಿಯಲಿ;

ಕಳೆದು ಹೋಗುತಿಹೆ
ನಾ ಕತ್ತಲ ಕೂಪದಲಿ;

          ವೀರಕವಿ............

Monday, 25 April 2011

ಗೀತ ಸ್ಪೂರ್ತಿ....


ಹಾಯ್.........

          ಇದು "ಗೀತ" ಚೌರ್ಯವೋ, "ಗೀತ" ಸ್ಪೂರ್ತಿಯೋ ತಿಳಿಯದು. ಆದರೂ ಒಂದು ಹಾಡನ್ನು ಕೇಳಿದಾಗ ನನಗನ್ನಿಸಿದ್ದು ಹೀಗೆ....
          ಅಂದ ಹಾಗೆ, ಇದೊಂದು ರೀತಿಯ "ಗಜ ಪ್ರಸವವಿದ್ದಂತೆ". ಯಾಕೆಂದರೆ, ಈ ಕೆಳ ಸಾಲುಗಳಿಗೆ ಸ್ಪೂರ್ತಿಯಾದ ಹಾಡನ್ನು ಕೇಳಿ, ಸರಿ ಸುಮಾರು ಒಂದುವರೆ ವರುಷಗಳ ಕಾಲವಾಯಿತು. ಈಗ, ಇದನ್ನು ಬರೆಯಲು, ಸಮಯ ಸಿಕ್ಕಿದೆ.

          ಆರಾಮಾಗಿ ಇದ್ದೆ ನಾನು
            month end  ಬಂದು
          ಅದು ಏನಾಯಿತು?         
          ಅರೆ ಏನಾಯಿತು
            tension ಹೆಚ್ಚಾಯಿತು
          ಸಿಗರೇಟ್ ಪ್ಯಾಕೊಂದು
          ಹೀಗೆ ಖಾಲಿಯಾಯಿತು

          ಆರಾಮಾಗಿ ಇದ್ದೆ ನಾನು!!

                ನೆನೆಯುತಾ, MIS ನೆನೆಯುತಾ
          ಮೈ ಇನ್ನೂನು
          ಬೆವರುತಾ ಹೋಯಿತು
          ನೆನೆಯುತಾ, deadline ನೆನೆಯುತಾ
          ಮನ ಇನ್ನೂನು
          tension ಆಯಿತು

          ಕಪ್ಪಾಗಿ, ಒತ್ತಾಗಿದ್ದ ಕೂದ್ಲ
          ಉದ್ರಿ ಹೋಗಿ ಬಕ್ಕ ತಲೆಯಾಯಿತೂ

          ಅರೆ ಏನಾಯಿತು
          ಸಿಟ್ಟು ಹೆಚ್ಚಾಯಾಯಿತು
          normal ಇದ್ದ BP
          ಹೀಗೆ ಹೆಚ್ಚಾಯಿತು

          ಆರಾಮಾಗಿ ಇದ್ದೆ ನಾನು!!

                   ವೀರ ಕವಿ............

Monday, 18 April 2011

ಅಣ್ಣಾ ಹಜಾ(ರ್)ರೇ..............


ಬಿದ್ದರೂ ಕೆಳೋದಿಲ್ಲಾ
ಸತ್ತರೂ ನೊಡೋದಿಲ್ಲಾ;

ಕಷ್ಟಕ್ಕ ಕರಗೋದಿಲ್ಲಾ
ಸಂತೋಷಕ್ಕ ನಲಿಯೋದಿಲ್ಲಾ;

ಅಂಥಾದ್ರಾಗ ಇಂವ್ನೆಲ್ಲಿಂದ
ಬಂದ ಅಣ್ಣಾ ಹಜಾರೆ?

ಲಂಚಾ ಕೊಡ್ತೀವಿ
ಕೊಟ್ಟದ್ದಕ್ಕ ಮರಗ್ತೀವಿ;

ಅನ್ಯಾಯನೂ ಮಾಡ್ತೀವಿ
ಸತ್ಯದ್ ಮಾತಾಡ್ತೀವಿ;

ಅಂಥಾದ್ರಾಗ ಇಂವ್ನೆಲ್ಲಿಂದ
ಬಂದ ಅಣ್ಣಾ ಹಜಾರೆ?

ಹುಟ್ಟ್ ಗುಣ
ಸತ್ರೂ ಹೋಗೊಲ್ಲಂತ;

ಭ್ರಷ್ಟ ಜನಾನ
ಒಮ್ಮಿಗೆ ತಡೆಯೋಕಾಗಲ್ಲಂತ;

ಅಂಥಾದ್ರಾಗ ಇಂವ್ನೆಲ್ಲಿಂದ
ಬಂದ ಅಣ್ಣಾ ಹಜಾರೆ?

          ವೀರ ಕವಿ..........

Tuesday, 5 April 2011

ನಿರೀಕ್ಷೆ!!!!

ಕಾರ್ಮೋಡದಲಿ ಗೋಚರಿಸೀತೆ ಬೆಳಕು
ಚಿಗುರೊಡೆದೀತೆ ಸಂತಸದ ಬದುಕು;

ದೊರಕೀತೆಂದು ಸುಖ ಶಾಂತಿ ನೆಮ್ಮದಿ
ಕಳೆದೀತೆಂದು ಬದುಕಿನ ಇಬ್ಬದಿ;
ನೋವುಂಡು ನಂಜುಂಡನಾಗಬೇಕಂತೆ
ಹಿತ ನುಡಿವವರಿಗೇನು ಕೊರತೆ;

ಚಿಂತಿಸಿದರೆ ಎನೂ ಫಲವಿಲ್ಲ
ಚಿಂತಿಸದಿದ್ದರೆ ಬದುಕಲೇನು ಸುಖವಿಲ್ಲ;

ಕನಸು ಇರಬೇಕು ಬಾಳಿನಲಿ
ಕನಸೇ ಕನಸಾಗಬಾರದು ಭವಿತವ್ಯದಲಿ;
 

               ವೀರಕವಿ.....