Monday 7 October 2013

ಆಸೆ!!!!



ಆಸೆ, ಆಗಸದಗಲ
ಬಯಕೆ ಬಾನಿನಗಲ
ಕಂಗಳ ನೋಟವಾಗುವಾಸೆ
ಅದರಂಚಿನ ಲಜ್ಜೆಯಾಗುವಾಸೆ||

ಕರಣಗಳ ಶಬ್ಧವಾಗುವಾಸೆ
ಅಧರದೊಳಗಿನ ದನಿಯಾಗುವಾಸೆ
ಅದರಂಚಿನ ನಗುವಾಗುವಾಸೆ
ಕರದೊಳಾಡುವ ಮುಂಗುರುಳಾಗುವಾಸೆ||

ತೋಳ ಬಂಧಿಯಾಗುವಾಸೆ
ಎದೆಯ ಬಡಿತವಾಗುವಾಸೆ
ಹ್ರುದಯದಾ ಮಿಡಿತವಾಗುವಾಸೆ
ನಡುವಿನಾ ಕಂಪನವಾಗುವಾಸೆ||

ಕಿಬ್ಬೊಟ್ಟೆಯಾ ಬಯಕೆಯಾಗುವಾಸೆ
ಅದ ಪೂರೈಸುವಾ
ಮದನ ನಾನಾಗುವಾಸೆ
ಕಾಲ್ಗಳ ಗೆಜ್ಜೆಯಾಗುವಾಸೆ||

ಬೆರಳಂಚಲಿ ಮೂಡುವಾ
ರಂಗವಲ್ಲಿ ನಾನಾಗುವಾಸೆ
ಆಸೆಗಳ ಅರಸನಾಗುವಾಸೆ
ಬಯಕೆಗಳ ಭಟನಾಗುವಾಸೆ||

          

 

No comments:

Post a Comment