Wednesday 23 March 2011

ತ್ಸುನಾಮಿ!!!!

ಸೂರ್ಯಪ್ಪನ್ನೂ ಪರೀಕ್ಷಿಸ್ತೀವಿ
ಚಂದ್ರಾಮನ್ನೂ ಬಿಡೋದಿಲ್ಲಾ;

ಆಕಾಶಕ್ಕ ಏಣಿ ಹಾಕ್ತೀವಿ
ಪಾತಾಳಾನೂ ದೂರಿಲ್ಲಾ;
ಮುಂದಾಗೋದನ್ನ ತಿಳ್ಕೋತೇವಿ
ಹಿಂದಾಗಿದ್ದನ್ನ ಮರೆಯೋದಿಲ್ಲಾ;
ತದ್ರೂಪಾನ್ನ್ ಸ್ರಷ್ಟಿಸ್ತೇವಿ
ಮೂಡ ನಂಬಿಕೇನೂ ಬಿಡೋದಿಲ್ಲಾ;
ಏನೇನೋ ಸಾಹಸಾ ಮಾಡ್ತೇವಿ
ಸ್ರಷ್ಟಿ ಮೂಲ ತಿಳೀತಿಲ್ಲಾ;
ಭೂ ತಾಯಿ ಮುನ್ದರ
ನೀವ್ ನಾವ್ಯಾರೂ ಉಳಿಯಂಗಿಲ್ಲಾ;
ಪ್ರಗತೀಗೂ ಪ್ರಕ್ರತಿಗೂ
ಹೊಂದಾಣಿಕೀ ಇಲ್ಲಾಂದ್ರ
ಆಗ್ಬಾರ್ದೆಲ್ಲಾ ಆಗತೈತಲ್ಲಾ;

ವೀರಕವಿ............
 
 
 

No comments:

Post a Comment